ನಿನ್ನ ಬಿಗಿದಪ್ಪಿ ಮುತ್ತಿಟ್ಟರೆ ಏನಂದುಕೊಳ್ಳುವೆ? ಎಂದಳು ಭ್ರಮೆಯಾಗಿರಬಹುದೆಂದು ಅಂದುಕೊಳ್ಳಬಹುದಷ್ಟೆ.. ನಾನಂದೆ.
ಕಾರಣವಿಲ್ಲದೆ ನಕ್ಕುಬಿಡು ಅಂದೆ, ಮತ್ತೆ ಹೊಸದಾಗಿ ಪ್ರೀತಿನಿವೇದಿಸು ಅಂದಳು.
ಸ್ಪರ್ಷಿಸುವಂಥ ಪ್ರೀತಿಕೊಡೆ ಅಂದೆ.. ಮುತ್ತಿಟ್ಟು ನನ್ನ ನೋಡಿದಳಷ್ಟೆ..
ಕಡೆಗೂ ಬರೆಯಲಾಗಲೇ ಇಲ್ಲ ಬರೆಯಲೇಬಾರದ ಸಾಲೊಂದನ.. ಯಾವುದಿದೆ ನಮ್ಮ ಪ್ರೀತಿಯಲಿ ಅಂಥದ್ದು... ಅದಕ್ಕೇತಾನೆ ಬರೆಯಲಾಗದ್ದು...!!!!
ಮೆರವಣಿಗೆಯಾಕೆ ಮನದಪ್ರೀತಿಗೆ... ಬೆನ್ನಲ್ಲೇ ಹೊತ್ತು ಮನೆಯಲ್ಲೇ ತಿರುಗುವೆ ನೀನಿಷ್ಟಪಡುವ ರೀತಿಗೆ.
ಪುಗಸಟ್ಟೆ ಕೊಡಲಿಲ್ಲ ಎದೆಯ ಜಾಗವ ಇಂಥ ದುಬಾರಿ ಕಾಲದಲ್ಲಿ ಹುಚ್ಚನಂತೆ. ಏನೋ ನನ್ನವಳೆಂಬ ಮುಲಾಜಷ್ಟೆ.. ಮರೆತುಬಿಟ್ಟೀಯಾ.. ಬದುಕಿರುವವರೆಗೂ ಅಲ್ಲೇ ಇರುವೆನೆಂಬ ಒಪ್ಪಂದಕೆ ಸಹಿ ಹಾಕಿರುವೆ..
ಮಂದಹಾಸದಲೆ ಉತ್ತರಿಸಲೆ ನಿನ್ನಕೋಪದ ನೋಟಗಳಿಗೆ... ನಾ ಮಾತಾಡಿದರೆ ನಿನ್ನ ಕೋಪ ಹೆಚ್ಚಾದೀತೇ ಹೊರತು ನಿನ್ನಲ್ಲಿ ಮಂದಹಾಸ ಮೂಡುವುದ ನಾ ಕಾಣೆ.