ಸನ್ನೆಯಲೆ ಸಹಿಮಾಡು ಸಾಕು,
ಮುದ್ದಿಸಲು ಮಾತಾಡಿ ಕರೆಯಬೇಕಿಲ್ಲ.
ಪೋಲಿ ಪರಮಾತ್ಮ ನಾನೆಂದು
ಪ್ರೀತಿಯಲಿ ಬೈದವಳು ನೀನು,
ಕಾಲ್ಬೆರಳಲ್ಲಿ ನೆಲವ ತೀಡಿದರೆ ಸಾಕು
ಕೈ ಹಿಡಿದು ಎಳೆಯಬೇಕೆಂದಿಲ್ಲ.
ಪೆದ್ದಿ ನೀನು,
ತಲೆಬಾಚಿದ ಬಾಚಣಿಕೆಯ ಬೇಕಂತಲೇ
ಜಗುಲಿಯಲಿ ಮರೆಯುವುದ್ಯಾಕೆ,
ನನಗೂ ಹಾಡಲು ಬಿಡದೆ,
ಅಪಸ್ವರದಲಿ ಘೀಳಿಡುವುದ್ಯಾಕೆ,
ಮಡಚಿಟ್ಟ ಚಾದರವ ಮತ್ತೆ ಬಿಡಿಸಿಟ್ಟು
ವಿನಾಕಾರಣ ದೀಪವನಾರಿಸಿ,
ಮೊಂಬತ್ತಿಗೆ ಬೆಂಕಿಯಿಟ್ಟು
ಮಾಳಿಗೆಯ ಕಪ್ಪಲ್ಲಿ ಬಿಗಿದಪ್ಪಿದರೇನೇ
ಅರ್ಥವಾಗಬೇಕೆಂದಿಲ್ಲ...
ಕಛೇರಿ ವೇಳೆಯಲೇ ಖಾಲಿ ಸಂದೇಶ ಬಂದಿರಲು
ಮನೆಗೆ ಬಂದೊಡನೆಯೆ
ಉಪಹಾರಕೂ ಮೊದಲು ಮುತ್ತೊಂದು ಸಿಕ್ಕಿರಲು
ಮತ್ತಿನ್ನೇನು ತಕರಾರು?
ಬಾಯ್ತುಂಬ ಕರೆಯಲು,
ಸಂಕೋಚದಿ ಸಣ್ಣವಳಾಗುವುದು ಬೇಡ,
ಸನ್ನೆಯಲೆ ಸಹಿಮಾಡು ಸಾಕು,
ಮುದ್ದಿಸಲು ಮಾತಾಡಿ ಕರೆಯಬೇಕಿಲ್ಲ.
ಮುದ್ದಿಸಲು ಮಾತಾಡಿ ಕರೆಯಬೇಕಿಲ್ಲ.
ಪೋಲಿ ಪರಮಾತ್ಮ ನಾನೆಂದು
ಪ್ರೀತಿಯಲಿ ಬೈದವಳು ನೀನು,
ಕಾಲ್ಬೆರಳಲ್ಲಿ ನೆಲವ ತೀಡಿದರೆ ಸಾಕು
ಕೈ ಹಿಡಿದು ಎಳೆಯಬೇಕೆಂದಿಲ್ಲ.
ಪೆದ್ದಿ ನೀನು,
ತಲೆಬಾಚಿದ ಬಾಚಣಿಕೆಯ ಬೇಕಂತಲೇ
ಜಗುಲಿಯಲಿ ಮರೆಯುವುದ್ಯಾಕೆ,
ನನಗೂ ಹಾಡಲು ಬಿಡದೆ,
ಅಪಸ್ವರದಲಿ ಘೀಳಿಡುವುದ್ಯಾಕೆ,
ಮಡಚಿಟ್ಟ ಚಾದರವ ಮತ್ತೆ ಬಿಡಿಸಿಟ್ಟು
ವಿನಾಕಾರಣ ದೀಪವನಾರಿಸಿ,
ಮೊಂಬತ್ತಿಗೆ ಬೆಂಕಿಯಿಟ್ಟು
ಮಾಳಿಗೆಯ ಕಪ್ಪಲ್ಲಿ ಬಿಗಿದಪ್ಪಿದರೇನೇ
ಅರ್ಥವಾಗಬೇಕೆಂದಿಲ್ಲ...
ಕಛೇರಿ ವೇಳೆಯಲೇ ಖಾಲಿ ಸಂದೇಶ ಬಂದಿರಲು
ಮನೆಗೆ ಬಂದೊಡನೆಯೆ
ಉಪಹಾರಕೂ ಮೊದಲು ಮುತ್ತೊಂದು ಸಿಕ್ಕಿರಲು
ಮತ್ತಿನ್ನೇನು ತಕರಾರು?
ಬಾಯ್ತುಂಬ ಕರೆಯಲು,
ಸಂಕೋಚದಿ ಸಣ್ಣವಳಾಗುವುದು ಬೇಡ,
ಸನ್ನೆಯಲೆ ಸಹಿಮಾಡು ಸಾಕು,
ಮುದ್ದಿಸಲು ಮಾತಾಡಿ ಕರೆಯಬೇಕಿಲ್ಲ.
No comments:
Post a Comment